ನಮ್ಮ ಕನ್ನಡದ ಕಂದ ಡಾ|ರಾಜ್‍ಕುಮಾರ್
ಮುಕ್ಕೋಟಿ ಕನ್ನಡಿಗರ ಆಸ್ತಿಯಾದ ನಮ್ಮ ಅಣ್ಣಾವ್ರ ಬಗ್ಗೆ ಯಾರಿಗೆ ತಿಳಿಯದು ಹೇಳಿ? ಈ ನಮ್ಮ ಮುತ್ತುರಾಜ ನಮ್ಮೆಲ್ಲ ಕನ್ನಡಿಗರ ಆಸ್ತಿ. ಅವರ ನೆನಪುಗಳು, ಅವರ ನಡೆ ನುಡಿ, ಅವರ ಮಾತುಗಳು, ಅವರ ನಟನೆ, ಅವರ ಸ್ವಭಾವ ಎಂದಿಗೂ ಮರೆಯಲಾಗದು. ಕನ್ನಡದ ಕಣ್ಮಣಿ, ಕನ್ನಡ ಮಣ್ಣಿನ ಮಗನಾದ ಈ ನಮ್ಮ ಅಣ್ಣಾವ್ರು ತಮ್ಮ ಅಭಿಮಾನಿಗಳಿಗೆ ದೇವರೆಂದು ಭಾವಿಸುತ್ತಿದರು. ಇಷ್ಟೊಂದು ಸರಳ ಜೀವಿ ಆಗಿದ್ದ ಈ ನಮ್ಮ ಕನ್ನಡ ನಾಡಿನ ಬಂಗಾರದ ಮನುಷ್ಯನಿಗೆ ಈ ಅಭಿಮಾನಿಯಿಂದ ಒಂದು ನೆನಪಿನ ಕವನ-
ಕನ್ನಡ ನಾಡಿಗೆ ಹೊಸ ಬೆಳಕು ಕಾಣಿಸಿತು,
ನಮ್ಮ ಮುತ್ತುರಾಜ ಈ ನಾಡಿಗೆ ಕಾಲಿಟ್ಟ ಕ್ಷಣ.
ನಮ್ಮ ನಾಡು ಪಾವನವಾಯಿತು,
ಕನ್ನಡದ ಕಂದನ ಲವ-ಲವಿಕೆಯಿಂದ.
ಸರಳ ಜೀವಿ ನಮ್ಮ ಈ ನಟಸಾರ್ವಭೌಮರು,
ಎಲ್ಲರನ್ನೂ ತಮ್ಮ ಅಭಿಮಾನಿ ದೇವರುಗಳೆಂದು ಭಾವಿಸುತ್ತಿದ್ದರು ನಮ್ಮ ರಾಜಣ್ಣನವರು.
ಕನ್ನಡ ತಾಯಿಯ ಮಡಿಲಲ್ಲಿ ಬೆಳೆದ ಕನ್ನಡದ ಕುಲಪುತ್ರನು ಇವನು,
ಕನ್ನಡ ಪ್ರೇಮಿಯಾದ ನಾನು ಅವರ ಅಭಿಮಾನಕ್ಕೆ ಶರಣು.
ಅವರಿಲ್ಲದ ನಾಡು, ಬೆಳಕು ನೀಡದ ಸೂರ್ಯನಂತೆ,
ಅವರಿಲ್ಲದ ಭೂಮಿ ಸುವಾಸನೆ ಇಲ್ಲದ ಹೂವಿನಂತೆ.
ಮತ್ತೆ ಹುಟ್ಟಿ ಬಾ ನೀನು, ಓ ರಾಜಣ್ಣ.
ಕನ್ನಡ ನಾಡನ್ನು ಮತ್ತೆ ಬೆಳಗಿಸು ನೀನು, ಓ ರಾಜಣ್ಣ.
ನಿಮಗೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು.
ಹೆಮ್ಮೆಯಿಂದ ಹೇಳುತ್ತೇನೆ ನಾನೊಬ್ಬ ಕನ್ನಡಿಗ.