ಅಮ್ಮ
ಕೋಮಲವಾದ ಕಣ್ಣುಗಳು ತೆರೆಯಿತು ಪುಟ್ಟ ಕಂದ,
ಆ ಕಣ್ಣುಗಳಿಂದಲೇ ಹರಿಯಿತು ಮುತ್ತಿನಂತಹ ಕಣ್ಣೀರು,
ಅದೇ ವೇಳೆಯಲ್ಲಿ ಕೇಳಿತು ಆ ಕಂದಮ್ಮ ಅಳುವ ಸಿಹಿ ಧ್ವನಿ,
ಆ ಧ್ವನಿ ಕೇಳಿ ಮುಗುಳ್ನಕ್ಕಿದವಳೇ ಅಮ್ಮ.
ತನಗೆ ನೋವಾದರೂ ಪ್ರೀತಿ ಕೊಡುವವಳೇ ಅಮ್ಮ,
ತಪ್ಪು ಮಾಡಿದರೂ ಕ್ಷಮಿಸುವವಳೇ ಅಮ್ಮ,
ತಾನು ತಿನ್ನದಿದ್ದರು ನಮ್ಮನ್ನು ತಿನ್ನಿಸುವವಳೇ ಅಮ್ಮ,
ತಾನು ನೆನೆದರೂ ನಮ್ಮನ್ನು ಸುರಕ್ಷೆ ನೀಡುವವಳೇ ಅಮ್ಮ.
ನಮ್ಮ ಮೊದಲ ಪಾಠ ಕಲಿಸಿದವಳೇ ಅಮ್ಮ,
ಟೀಟೆ ಮಾಡಿದಾಗ ಮೊದಲ ಏಟನ್ನು ನೀಡಿದವಳೇ ಅಮ್ಮ,
ಮೊದಲ ಪದಗಳನ್ನು ಹೇಳಿಕೊಟ್ಟವಳೇ ಅಮ್ಮ,
ನಮಗೆ ನೋವಾದಾಗ ಹೇಳುವ ಮೊದಲ ಪದವೇ ಅಮ್ಮ.
ತನ್ನ ಕಂದ ಎಷ್ಟೇ ಬೆಳೆದರು, ಪುಟ್ಟ ಕಂದ ಎಂದು ಭಾವಿಸುವವಳೇ ಅಮ್ಮ,
ಎಲ್ಲರಿಗೂ ಮೀರಿ ಪ್ರೀತಿಸುವವಳೇ ಅಮ್ಮ,
ತನ್ನ ಕಂದನಿಂದ ಏನನ್ನು ಬಯಸದೇ, ಬರಿ ಪ್ರೀತಿಯನ್ನು ಬಯಸುವವಳೇ ಅಮ್ಮ,
Tumba chennagide srinivas nimma kavana.
ReplyDeleteKeep writing...
-Pramodh
http://pramodhmysore.blogspot.com