Cutie :)

Nanna lokakke swagatha :)

Nanna lokakke swagatha :)

Wednesday, August 4, 2010

ಕನ್ನಡ ಎಂದರೆ ಜನ ಏಕೆ ಹೀಗೆ ಆಡುತ್ತಾರೆ ??

Recent ಆಗಿ ನಮ್ company unit ಇಂದ ಒಂದು mail ಬಂತು... :
ನಿಮ್ಮ ಕಥೆಗಳು, ಕವನಗಳು, ನಿಮ್ಮ ಪೇಂಟಿಂಗ್ಸ್ ಗಳು, ನಿಮ್ಮ ಅಡಿಗೆ ರುಚಿಗಳು, ಹೀಗೆ ಏನೇ ಇರಲಿ ನಮಗೆ ಕಳುಹಿಸಿ, newsletterನಲ್ಲಿ publish ಮಾಡುತ್ತಿವಿ, ಎಂದು mail ಬಂದಿತ್ತು. ಅದಕ್ಕಾಗಿ ನಾನು, ಕನ್ನಡದಲ್ಲಿ ಬರೆದಿರುವ "ಅಮ್ಮ" ಎಂಬ ನನ್ನ ಒಂದು ಕವಿತೆಯನ್ನು ಕಳುಹಿಸಿದೆ. ಸ್ವಲ್ಪ ದಿನಗಳ ನಂತರ, ನಮ್ಮ unit ಇಂದ ಅದಕ್ಕೆ ಸಂಬಂಧ ಪಟ್ಟವರು ಯಾರೋ ನನಗೆ ಕಾಲ್ ಮಾಡಿ ಈ ರೀತಿ ಹೇಳಿದರು :
 "ನಾನು ನಿಮ್ಮ ಕವಿತೆಎನ್ನು ಓದಿದೆ. ತುಂಬಾ ಚೆನ್ನಾಗಿತ್ತು. ಆದರೆ ಇಲ್ಲಿ ಜಾಸ್ತಿ ಕನ್ನಡ ಮಾತನಾಡುವವರು ಇಲ್ಲ. ಸೋ, newsletterನಲ್ಲಿ publish ಮಾಡಿದ್ರೆ ಸರಿ ಇರತ್ತಾ ? ನಂಗೂ publish ಮಾಡಬೇಕು ಎಂದು ಇಷ್ಟ. ಆದರೆ ನೋಡಿ, ನಾನು ಕನ್ನಡದವಳೇ, ಆದರೂ ನಂಗೆ ಕನ್ನಡ ಸರಿಯಾಗಿ ಬರುವುದಿಲ್ಲ. ಆದರೆ ನಾನು ಖಂಡಿತ ಆ newsletter ನಲ್ಲಿ ಅದಕ್ಕೆ ಒಂದು link ಕೊಡುತ್ತೇನೆ."

ನನ್ನ ಕವಿತೆಯೆನ್ನು publish ಮಾಡುವುದಿಲ್ಲ ಎಂದು ಹೇಳಿದಕ್ಕೆ ನನಗೆ ಬೇಜಾರ್ ಆಗಲಿಲ್ಲ. ಆದರೆ, ಅವರು ಯಾವಾಗ ನಾನೂ ಕನ್ನಡದವಳು, ಆದರೂ ನನಗೆ ಕನ್ನಡ ಸರಿಯಾಗಿ ಬರುವುದಿಲ್ಲ ಎಂದು ಹೇಳಿದರೋ, ಆಗ ತುಂಬಾ ಬೇಜಾರ್ ಆಯ್ತು, ಹಾಗೆಯೇ, ಕೋಪ ಕೂಡ ಬಂತು.

Publish ಮಾಡದಿರುವುದಕ್ಕೆ ಕಾರಣ ಕೊಡದಿದ್ದರೂ ಪರವಾಗಿಲ್ಲ. ಆದರೆ, ಆ ಕಾರಣ ಕೊಡುವುದಕ್ಕಾಗಿ, ಕನ್ನಡವೇ ಸರಿಯಾಗಿ ಬರುವುದಿಲ್ಲ ಎಂದು ಹೇಳುವುದು ಸರಿಯೇ ?? ನೀವೇ ಹೇಳಿ.
ಈ ರೀತಿಯ ಜನರು ಎಲ್ಲೆಡೆ ನಮ್ಮ ಕರ್ನಾಟಕದಲ್ಲಿ ಇದಾರೆ. ಕನ್ನಡ ಬಂದರು ಸಹ, ಕನ್ನಡ ಮಾತನಾಡುವುದು ಅವಮಾನದ ರೀತಿಯಲ್ಲಿ ವರ್ತಿಸುತ್ತಾರೆ. ಛೆ...

No comments:

Post a Comment